ಚಾಮರಾಜನಗರ ವಿಶ್ವವಿದ್ಯಾನಿಲಯ

ಕರ್ನಾಟಕ ಸರ್ಕಾರ

ಇತ್ತೀಚಿನ ಸುದ್ದಿ

wrappixel kit

ಚಾಮರಾಜನಗರ ವಿಶ್ವವಿದ್ಯಾನಿಲಯ

ಚಾಮರಾಜನಗರ ವಿಶ್ವವಿದ್ಯಾನಿಲಯವನ್ನು ಕರ್ನಾಟಕ ಸರ್ಕಾರವು 2023ರಲ್ಲಿ ನೂತನವಾಗಿ ಪ್ರಾರಂಭಿಸಿದೆ ಹಾಗೂ ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ಕೌಶಲ್ಯವನ್ನು ವೃದ್ಧಿಸುವ ಉದ್ದೇಶದಿಂದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗವಕಾಶಕ್ಕೆ ಕೌಶಲ್ಯಾಧಾರಿತ ವೃತ್ತಿಪರ ಕೋರ್ಸ್|ಗಳನ್ನು ನೀಡುವ ಮೂಲಕ ಚಾಮರಾಜನಗರ ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ವಿಶ್ವವಿದ್ಯಾನಿಲಯವು ಜವಾಬ್ದಾರಿಯಾಗಿದೆ. ವಿಶ್ವವಿದ್ಯಾನಿಲಯದ ಕ್ಯಾಂಪಸ್|ನಲ್ಲಿ ಪ್ರಾಯೋಗಿಕ ಶಿಕ್ಷಣ ಕಲಿಯಲು ಹಾಗೂ ತರಗತಿಗಳಲ್ಲಿ ಕೌಶಲ್ಯಗಳನ್ನು ಅಭ್ಯಾಸ ಮಾಡಲು ಅವಕಾಶಗಳನ್ನು ಕಲ್ಪಿಸಿದೆ. ಗ್ರಾಮೀಣ ವಿದ್ಯಾರ್ಥಿಗಳು ಜಾಗತಿಕ ತಾಂತ್ರಿಕ ಕೌಶಲ್ಯದ ಎದುರು ಸ್ಪರ್ಧಿಸಲು ವಿಶ್ವವಿದ್ಯಾನಿಲಯವು ಸುಸ್ಥಿರ ಕ್ರಿಯಾತ್ಮಕ ಸನ್ನಿವೇಶಗಳನ್ನು ನಿರ್ಮಿಸಿದೆ.

ಚಾಮರಾಜನಗರವನ್ನು ಮೊದಲು ಅರಿಕುಠಾರ ಎಂದು ಕರೆಯಲಾಗುತ್ತಿತ್ತು.  ಮೈಸೂರಿನ ಅರಸರಾದ ಚಾಮರಾಜ ಒಡೆಯರ್ ಅವರು ಇಲ್ಲಿ ಜನಿಸಿದ ಐತಿಹಾಸಿಕ ಹಿನ್ನೆಲೆಯಲ್ಲಿ ಅರಿಕುಠಾರವನ್ನು ಚಾಮರಾಜನಗರ ಎಂದು ಮರುನಾಮಕರಣ ಮಾಡಲಾಯಿತು ಹಾಗೂ ವಿಶಾಲ ಮೈಸೂರು ಜಿಲ್ಲೆಯಿಂದ 1997ರಲ್ಲಿ ಬೇರ್ಪಡಿಸಿ ನೂತನ ಜಿಲ್ಲೆಯಾಗಿ ಸ್ಥಾಪಿಸಲಾಯಿತು. ಈ ಜಿಲ್ಲೆಯು ರಾಜ್ಯದ ರಾಜ್ಯಧಾನಿ ಬೆಂಗಳೂರಿನಿಂದ ನೈರುತ್ಯಕ್ಕೆ ಸುಮಾರು 176 ಕಿ.ಮೀ  ದೂರದ್ದಲಿದ್ದು, ಚಾಮರಾಜನಗರ ವಿಶ್ವವಿದ್ಯಾನಿಲಯವು ಜಿಲ್ಲಾ ಕೇಂದ್ರದಿಂದ 7 ಕಿ.ಮೀ ಅಂತರದಲ್ಲಿದೆ. ಚಾಮರಾಜನಗರ-ನಂಜನಗೂಡು-ಮೈಸೂರು ರಾಜ್ಯ  ಹೆದ್ದಾರಿಗೆ ಹೊಂದಿಕೊಂಡಂತೆ ಉತ್ತಮ ರಸ್ತೆ ಮತ್ತು ರೈಲಿನ ಸಂಪರ್ಕವನ್ನು ಹೊಂದಿದೆ.

ಚಾಮರಾಜನಗರವು ಐತಿಹಾಸಿಕ ಸ್ಮಾರಕಗಳು ಮತ್ತು ಪ್ರಾಕೃತಿಕವಾಗಿ, ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಪ್ರದೇಶಗಳನ್ನು ಒಳಗೊಂಡ ಭವ್ಯವಾದ ಪ್ರವಾಸಿ ಕೇಂದ್ರವಾಗಿದೆ. ಇದು ಕರ್ನಾಟಕ ರಾಜ್ಯದ ದಕ್ಷಿಣ ಭಾಗದ ಗಡಿ ಜಿಲ್ಲೆ ಯಾಗಿದ್ದು, ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಹೊಂದಿಕೊಂಡಿದೆ. ಪ್ರಕೃತಿಯ ಮಡಿಲಿನಲ್ಲಿರುವ ಚಾಮರಾಜನಗರ ವಿಶ್ವವಿದ್ಯಾನಿಲಯವು ಕರ್ನಾಟಕ ಜನಪದ ಸಾಹಿತ್ಯ ಮತ್ತು ಕಲೆಗಳ ತವರೂರಾದ ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿದೆ ಹಾಗೂ 54 ಎಕರೆ ವಿಸ್ತೀರ್ಣವುಳ್ಳ ಕ್ಯಾಂಪಸ್ ಹೊಂದಿದ್ದು, ಜಿಲ್ಲೆಯ ಜೀವನದಿ ಸುವರ್ಣಾವತಿಯ ಅಸ್ಮಿತೆಗಾಗಿ ವಿಶ್ವವಿದ್ಯಾನಿಲಯದ ಕ್ಯಾಂಪಸ್ ಅನ್ನು ಸುವರ್ಣ ಗಂಗೋತ್ರಿ ಎಂದು ಕರೆಯಲಾಗಿದೆ.

ಮತ್ತಷ್ಟು ಓದಿ

ಸೌಲಭ್ಯಗಳು

×
ABOUT DULT ORGANISATIONAL STRUCTURE PROJECTS